Saturday, September 23, 2017

ರೈತರ ಹಬ್ಬ 'ಧಾರವಾಡ ಕೃಷಿ ಮೇಳ'



ಪ್ರತಿ ವರ್ಷದಂತೆ ಈ ವರ್ಷವೂ ಉತ್ತರ ಕರ್ನಾಟಕದ ರೈತರ ಹಬ್ಬ ಧಾರವಾಡ ಕೃಷಿ ಮೇಳಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಸೆಪ್ಟೆಂಬರ್  22 ರಿಂದ 25ರವರೆಗೆ ನಡೆಯಲಿರುವ ಮೇಳವನ್ನು 'ಜಲ ವೃದ್ದಿ ; ಕೃಣಿ ಅಭಿವೃದ್ಧಿ' ಧ್ಯೇಯವಾಕ್ಯದಡಿ ಆಯೋಜಿಸಲಾಗಿದೆ. 
'ಜಲ ಸಾಕ್ಷರತೆ ಹಾಗೂ ಕೃಷಿ ಕ್ಷೇತ್ರದ ವೈಜ್ಞಾನಿಕ ಹಾಗೂ ತಾಂತ್ರಿಕ ಬದಲಾವಣೆ ಬಗ್ಗೆ ರೈತರಿಗೆ ಮಾಹಿತಿ ನೀಡುವುದು ಮೇಳದ ಉದ್ದೇಶವಾಗಿದೆ.
ಸೆ. 22ರಂದು ಬೀಜ ಮೇಳಕ್ಕೆ ಚಾಲನೆ ನೀಡಲಾಗಿದ್ದು, ರೈತರು ಬೀಜ ಖರೀದಿಸಿ ಹಿಂಗಾರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಇದುವರೆಗೂ ನೂರಾರು ಟನ್ ಬೀಜ ಮಾರಾಟವಾಗಿದೆ.
ಎರಡನೇ ದಿನವಾದ ಸೆ. 23ರಂದು ಕೃಷಿ ಮೇಳವನ್ನು ಕೃಷಿ ಸಚಿವ ಕೃಷ್ಣ ಭೈರೇಗೌಡ ಉದ್ಘಾಟಿಸಿದರು. ಗಣಿ ಮತ್ತು  ಭೂ ವಿಜ್ಞಾನ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ   ವಿನಯ ಕುಲಕರ್ಣಿಯವರು ಅಧ್ಯಕ್ಷತೆ ವಹಿಸಿದ್ದರು.

ಕೃಷಿ ಸಚಿವರಾದ  ಕೃಷ್ಣ ಬೈರೇಗೌಡರವರು ಮೇಳದ ಅಂಗವಾಗಿ ಕೃಷಿ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ರಾಜ್ಯ ಸರ್ಕಾರದ  ಸಚಿವರು, ಸಂಸದರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಕೃಷಿ ಮೇಳದ ಅಂಗವಾಗಿ ಕೃಷಿ ಸಲಹಾ ಕೇಂದ್ರ, ಮತ್ಸ್ಯ ಮೇಳ, ಬೀಜ ಮೇಳ, ಚಾಂಪಿಯನ್ ರೈತರೊಂದಿಗೆ ಸಂವಾದ, ರೈತರಿಂದ ರೈತರಿಗಾಗಿ, ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ಆಧುನಿಕ ಕೃಷಿ ಸಂಶೋದನಾ ತಾಕುಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳು, ನಾಯಿ, ಹಸು, ಎಮ್ಮೆ , ಕುರಿ ತಳಿಗಳ ಪ್ರದರ್ಶನ, ಫಲ ಪುಷ್ಪ ತಾಂಬೂಲ ಪ್ರದರ್ಶನ, ಅಲಂಕಾರಿಕ ಮತ್ಸ್ಯ ಮೇಳ, ರೈತರ ಅನ್ವೇಷಣೆಯ ಪ್ರದರ್ಶನಗಳು, ಸಮಗ್ರ ಕೃಷಿ ಪದ್ಧತಿ, ಜಲಾನಯನ ಅಭಿವೃದ್ಧಿ, ಕೃಷಿ ಹುಟ್ಟುವಳಿಗಳ ಮೌಲ್ಯವರ್ಧನೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಳಿಗೆಗಳು ಕೃಷಿ ಮೇಳದಲ್ಲಿ ಇವೆ.


ಜತೆಗೆ ಬೃಹತ್ ಕೃಷಿ ಉಪಕರಣಗಳ ಪ್ರದರ್ಶನ, ಪುಸ್ತಕ ಪ್ರಕಟಣೆಗಳು, ಉತ್ತಮ ಕೃಷಿ ಪರಿಕರಗಳು ಜೈವಿಕ ಪೀಡೆ ನಾಶಕಗಳು ಮೇಳದಲ್ಲಿ ಇವೆ. ಉತ್ತರ ಕರ್ನಾಟಕ ಸೇರಿ ಹಲವು ಜಿಲ್ಲೆ, ರಾಜ್ಯಗಳ ರೈತರು ಮೇಳಕ್ಕೆ ಬರುತ್ತಿದ್ದಾರೆ.

ಸೆ. 25 ಮೇಳದ ಕೊನೆ ದಿನವಾಗಿದ್ದು ತಾವೂ ಸಹ ಮೇಳಕ್ಕೆ ಬಂದು ಒಂದು ಸುತ್ತು ಹಾಕಬಹುದು.


0 comments:

Post a Comment

Copyright © Emediakarnataka | Designed With By Blogger Templates
Scroll To Top