ಭಾರತದ ಗಡಿಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳ ಪೂರೈಕೆ ಮಾಡುತ್ತಿದ್ದ ಪಾಕಿಸ್ತಾನದ ಮಾದಕ ವಸ್ತುಗಳ ಜಾಲವನ್ನು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಪೊಲೀಸರು ಬಯಲು ಮಾಡಿದ್ದಾರೆ.
ಅಮೃತಸರ ಉಪ ವಿಭಾಗದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿ ದಂಧೆಕೋರರನ್ನು ಕೊಂದಿದ್ದಾರೆ.
ಈ ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.
ಹತರಾದ ಆರೋಪಿಗಳ ಬಳಿ 20 ಸಾವಿರ ಪಾಕಿಸ್ತಾನ್ ಕರೆನ್ಸಿ, ಎಕೆ _47 ಗನ್, 9 ಎಂಎಂ ಪಿಸ್ತೂಲ್, ನೋಕಿಯಾ ಮೊಬೈಲ್ ಮತ್ತು ಸಿಮ್ ಕಾರ್ಡ್ ಗಳನ್ನು ಜಪ್ತಿ ಮಾಡಲಾಗಿದೆ.
ಜತೆಗೆ ಆ ದಂಧೆಕೋರರ ಬಳಿ, 3 ಕೆ.ಜಿ ಹೆರೊಯಿನ್ ಹಾಗೂ 32 ಗ್ರಾಂ ಅಫಿಮು ಸಿಕ್ಕಿದೆ. ಈ ಕಾರ್ಯಾಚರಣೆಯಲ್ಲಿ ಪಂಜಾಬ್ 32 ನೇ ಬೆಟಾಲಿನ್ ಬಿಎಸ್ಎಫ್ ಪೊಲೀಸರು ಇದ್ದರು.
ಮಾದಕ ವಸ್ತುಗಳ ಮಾರಾಟದಿಂದ ಬಂದ ಹಣವನ್ನು ಆರೋಪಿಗಳು ಭಯೋತ್ಪಾದಕ ಸಂಘಟನೆಗೆ ಕೊಡುತ್ತಿದ್ದರು. ಜತೆಗೆ ಭಯೋತ್ಪಾದಕರಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು ಎಂಬುದು ಸದ್ಯಕ್ಕೆ ಪೊಲೀಸರಿಗೆ ಗೊತ್ತಾಗಿದೆ.
0 comments:
Post a Comment