ಅನಾರೋಗ್ಯದಿಂದ ಬಳಲುತ್ತಿದ್ದ ಭಾರತೀಯ ವಾಯುಪಡೆಯ ಹಿರಿಯ ಮಾರ್ಷಲ್ ಅರ್ಜನ್ ಸಿಂಗ್(98) ಶನಿವಾರ ನಿಧನರಾದರು.
ಭಾರತೀಯ ವಾಯುಪಡೆಯ ಮೊದಲ ಫೈವ್–ಸ್ಟಾರ್ ದರ್ಜೆ ಅಧಿಕಾರಿ ಅರ್ಜನ್ ಸಿಂಗ್ ಅವರನ್ನು ಶನಿವಾರ ಬೆಳಿಗ್ಗೆ ಸೇನಾ ಸಂಶೋಧನಾ ಹಾಗೂ ರೆಫೆರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಕ್ರಿಯಾಶೀಲ ವ್ಯಕ್ತಿಯಾಗಿ ಗುರುತಿಸಿಕೊಂಡ ಅರ್ಜನ್ ಸಿಂಗ್ ಅವರನ್ನು ಭಾರತೀಯ ವಾಯುಪಡೆಯ ಮೊದಲ ಮಾರ್ಷಲ್ ಎಂದೇ ಖ್ಯಾತರಾದವರು.
1965ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತದ ಗೆಲುವಿಗೆ ಅರ್ಜನ್ ಸಿಂಗ್ ಮಹತ್ವದ ಪಾತ್ರವಹಿಸಿದ್ದರು. 1964ರ ಆಗಸ್ಟ್‌ನಿಂದ 1969ರ ವರೆಗೂ ವಾಯುಪಡೆಯ ನೇತೃತ್ವ ವಹಿಸಿದ್ದರು. ಇವರು ಏರ್ ಚೀಫ್ ಮಾರ್ಷಲ್ ಸ್ಥಾನ(1966ರ ಜನವರಿ 16) ಪಡೆದ ಮೊದಲ ಭಾರತೀಯ ವಾಯುಪಡೆಯ ಮುಖ್ಯಸ್ಥ.
ಪ್ರಧಾನಿ ಮೋದಿ ಅರ್ಜನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
0 comments:
Post a Comment