ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ತಮಿಳುನಾಡಿನ ಪ್ರಭಾವಿ ರಾಜಕಾರಣಿ ಶಶಿಕಲಾ ಅವರಿಗೆ ಸಿಗುತ್ತಿದ್ದ ಐಶಾರಾಮಿ ಸವಲತ್ತುಗಳನ್ನು ಬಯಲು ಮಾಡಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಈ ವರ್ಷದ ರಾಷ್ಟ್ರಪತಿ ಪದಕ ಲಭಿಸಿದೆ.
ರಾಜ್ಯ ಕಾರಾಗೃಹಗಳ ಡಿಐಜಿ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಪತ್ತೆ ಹಚ್ಚಿದ್ದರು. ಸ್ವತಃ ಕಾರಾಗೃಹಗಳ ಇಲಾಖೆಯ ಡಿಜಿಪಿ ಸತ್ಯನಾರಾಯಣರಾವ್ ಅವರ ಮೇಲೆಯೇ ಲಂಚದ ಆರೋಪ ಮಾಡಿದ್ದರು.
ಇಲಾಖೆಯಲ್ಲಿ ಡಿಐಜಿ ಹಾಗೂ ಡಿಜಿಪಿ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಆಗಿತ್ತು. ಇದಕ್ಕೆ ತೀಲಾಂಜಲಿ ಹಾಡಲು ರೂಪಾ ಅವರನ್ನು ಕಾರಾಗೃಹಗಳ ಇಲಾಖೆಯಿಂದ ವರ್ಗ ಮಾಡಲಾಗಿತ್ತು.
ಸದ್ಯ ಅವರು ರಾಜ್ಯ ರಸ್ತೆ ಸುರಕ್ಷತಾ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಅವರ ದಿಟ್ಟ, ಪ್ರಾಮಾಣಿಕ ಸೇವೆಯನ್ನು ಮೆಚ್ಚಿ, ಅವರ ಸೇವಾ ಸಾಧನೆಗೆ ರಾಷ್ಟ್ರಪತಿ ಪದಕ ನೀಡಲಾಗಿದೆ. ಇತ್ತೀಚೆಗೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು ಪದಕ ಪ್ರದಾನ ಮಾಡಿದರು. ಅವರೊಂದಿಗೆ ಹಲವು ಐಪಿಎಸ್ ಅಧಿಕಾರಿಗಳಿಗೆ ಪದಕ ಪ್ರದಾನ ಮಾಡಲಾಯಿತು.
0 comments:
Post a Comment