ಹೊಸಬರ ಹಾಗೂ ಕನ್ನಡದ ಸಿನಿಮಾಗಳಿಗೆ ಬೆಲೆ ಇಲ್ಲ ಎಂಬುದು ಸಾಬೀತಾಗಿದೆ. ಹೊಸಬರೇ ಸೇರಿ ನಿರ್ಮಿಸಿರುವ ‘ಸಿನಿಮಾ ಫ್ಯಾರ್ ಡೈಸ್’ ಎಂಬ ಚಿತ್ರಕ್ಕೆ ರಾಜ್ಯದಲ್ಲಿ ಯಾವುದೇ ಚಿತ್ರಮಂದಿರ ಸಿಕ್ಕಿಲ್ಲ. ಇದರಿಂದಾಗಿ ಚಿತ್ರತಂಡ, ಚಿತ್ರಮಂದಿರದ ಮಾಲೀಕರಿಗೆ ಸೆಡ್ಡು ಹೊಡೆದು, ಯುಟ್ಯೂಬ್‌ನಲ್ಲಿ ಚಿತ್ರ ಬಿಡುಗಡೆ ಮಾಡಿ ಟಾಂಗ್ ಕೊಟ್ಟಿದ್ದಾರೆ. ಜತೆಗೆ ಚಿತ್ರೋದ್ಯಮದಲ್ಲಿ ನಡೆಯುತ್ತಿರುವ ರಾಜಕೀಯವನ್ನು ಸಿನಿಮಾದ ಕಥೆಯ ಮೂಲಕ ಬಯಲು ಮಾಡಿ ತೋರಿಸಿದ್ದಾರೆ.
‘ನನ್ ಹೆಸ್ರು ಲಕ್ಷ್ಮಣ್, ಲಕ್ಕಿ ಅಂತಾರ್ ಎಲ್ಲ. ಲಕ್ಕು ಐತೋ ಇಲ್ವೋ ಆ ದೇವರೆ ಬಲ್ಲ. ಸಿನಿಮಾನೆ ಉಸಿರು, ಇಲ್ಲಿ ಬೇಕು ಹೆಸರು’ ಎಂಬ ಸ್ಟೇಟಸ್ ಅನ್ನು ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿರುವ ಹುಡುಗ ಲಕ್ಷ್ಮಣ. ಆ ಸ್ಟೇಟಸ್ ಆತನ ಅನುಭವದ ಮಾತು ಎಂಬುದು ಆತನನ್ನು ಮಾತನಾಡಿಸಿದ್ದಾಗಲೇ ಗೊತ್ತಾಗುತ್ತದೆ..
50 ನಿಮಿಷಗಳ ಅವಧಿಯ ಈ ಸಿನಿಮಾವನ್ನು ಯಾವುದೇ ಥಿಯೇಟರ್ನಲ್ಲಿ ರಿಲೀಸ್ ಮಾಡುತ್ತಿಲ್ಲ. ನೇರವಾಗಿ ಯುಟ್ಯೂಬ್‌ನಲ್ಲಿ ಹರಿಬಿಡಬೇಕೆಂಬುದು ಸಿನಿ ತಂಡದ ನಿರ್ಧಾರ. ಕಾರಣ, ಚಿತ್ರಮಂದಿರಗಳು ಸಿಗುತ್ತಿಲ್ಲ. ಅಲ್ಲದೆ, ಸಿನಿಮಾದಲ್ಲಿರುವ ವಿಷಯವನ್ನು ಗಾಂಧಿನಗರದ ಮಂದಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಂತೆ. ಉತ್ತಮ ಚಿತ್ರವೊಂದನ್ನು ಕನ್ನಡದ ಸಿನಿಪ್ರಿಯರಿಗೆ ನೀಡಬೇಕೆಂಬ ನಿರ್ದೇಶಕನಿಗೆ, ಸದಭಿರುಚಿ ಸಿನಿಮಾ ಮಾಡಬೇಕೆಂಬ ಆಸೆ ಹೊತ್ತ ನಿರ್ಮಾಪಕನಿಗೆ ಗಾಂಧಿನಗರದ ಕೆಲ ಖ್ಯಾತನಾಮರು ಹೇಗೆಲ್ಲ ವ್ಯಾವಹಾರಿಕವಾಗಿ ವಂಚಿಸುತ್ತಾರೆ, ತುಳಿಯುತ್ತಾರೆ ಎಂಬುದು ಈ ಸಿನಿಮಾ ಕಥೆ.
ಮುಖ್ಯವಾಗಿ ಇಲ್ಲಿ ಸಿನಿಮಾ ವಿತರಣೆ, ಚಿತ್ರಮಂದಿರದ ಮಾಫಿಯಾವನ್ನು ಅನಾವರಣಗೊಳಿಸಲು ಹೊರಟಿದ್ದಾರೆ ನಿರ್ದೇಶಕರು. ಸಿನಿಮಾ ಮೋಹ ಹೊತ್ತ ನಿರ್ದೇಶಕನೊಬ್ಬ ಒಂದು ಸಿನಿಮಾ ಮಾಡಬೇಕೆಂದಾಗ ಎದುರಾಗುವ ಕಷ್ಟ ಇಲ್ಲಿದೆ. ಚಿತ್ರರಂಗದ ‘ಎಬಿಸಿಡಿ..’ ತಿಳಿಯದೆ ಸಿನಿಮಾ ನಿರ್ವಣಕ್ಕಿಳಿಯುವ ನಿರ್ವಪಕನಿಗೆ ಗಾಂಧಿನಗರದ ಪಡಸಾಲೆಯಲ್ಲಿ ಯಾವೆಲ್ಲ ರೀತಿಯ ಮೋಸಗಳಾಗುತ್ತವೆ ಎಂಬ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ ‘ಸಿನಿಮಾವಾಲ’! ಒಳ್ಳೆಯ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆ, ಪರಭಾಷಾ ಸಿನಿಮಾಗಳ ಸ್ಪರ್ಧೆ, ಇದೆಲ್ಲದರ ಮಧ್ಯೆ ಪೈರೆಸಿ ಕಾಟ.. ಇಂತಹ ಸಮಸ್ಯೆಗಳನ್ನೆಲ್ಲ ಎದುರಿಸಿ, ಸಿನಿಮಾ ಗೆಲ್ಲಬೇಕಾದ ಅನಿವಾರ್ಯತೆ ಇದೆ.
ಗಾಂಧಿನಗರದ ವ್ಯವಹಾರ ತಿಳಿಯದ, ಬರೀ ಕ್ರಿಯಾಶೀಲತೆಯನ್ನು ನೆಚ್ಚಿಕೊಂಡ ನಿರ್ದೇಶಕನ ಪಾತ್ರದಲ್ಲಿ ನೈಜ ಅಭಿನಯ ನೀಡಿದ್ದಾರೆ ಲಕ್ಷ್ಮಣ. ರೆಗ್ಯುಲರ್ ಸಿನಿಮಾದಂತೆ ಈ ‘..ಪ್ಯಾರ್ಡೈಸ್’ ಮೂಡಿಬಂದಿಲ್ಲ. 50 ನಿಮಿಷಗಳಲ್ಲಿ ಒಂದಷ್ಟು ವಾಸ್ತವಾಂಶಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಮುಂದಿನ ಸರಣಿಯಲ್ಲಿ ಇನಷ್ಟು ನೈಜ ಅಂಶಗಳನ್ನು ತೆರೆದಿಡುವ ಪ್ರಯತ್ನ ಮಾಡುವ ಉದ್ದೇಶ ಈ ತಂಡಕ್ಕಿದೆಯಂತೆ. ಸದ್ಯಕ್ಕೆ ಈ ಸಿನಿಮಾ ಇಂದು ಯುಟ್ಯೂಬ್‌ನಲ್ಲಿ ರಿಲೀಸ್ ಆಗುತ್ತಿದೆ. ‘ದಂಡುಪಾಳ್ಯ’, ‘ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಖ್ಯಾತಿಯ ನಿರ್ಮಾಪಕ ನಾರಾಯಣ ಬಾಬು ಹಾಗೂ ‘ಮಿ. ಡುಪ್ಲಿಕೇಟ್’, ‘ಇದು ಎಂಥಾ ಪ್ರೇಮವಯ್ಯ’ ಖ್ಯಾತಿಯ ನಿರ್ಮಾಪಕ ಕಶ್ಯಪ್ ದಾಕೋಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಈ ಸಿನಿಮಾವನ್ನು ಒಮ್ಮೆ ಪೂರ್ಣವಾಗಿ ನೋಡಿ. ನಂತರ ಸಿನಿಮಾ ಕ್ಷೇತ್ರಕ್ಕೆ ಬರಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಿದೆ....
ಸಿನಿಮಾ ನೋಡಲು ಇಲ್ಲಿ ಕ್ಲಿಕ್ ಮಾಡಿ...
0 comments:
Post a Comment