ಬೆಂಗಳೂರು ಕಾರ್ಲಟನ್ ಕಟ್ಟಡದಲ್ಲಿರುವ ಸಿಐಡಿ ಕಚೇರಿಯ ಕ್ಯಾಂಟೀನ್ ಬಳಿಯ ಶೌಚಾಲಯ ಹಲವು ತಿಂಗಳಿನಿಂದ ಗಬ್ಬು ನಾರುತ್ತಿದೆ.
ಸಿಐಡಿ ಅಧಿಕಾರಿಗಳ ಕಾರು ಚಾಲಕರು ಹೆಚ್ಚಾಗಿ ಈ ಶೌಚಾಲಯ ಬಳಕೆ ಮಾಡುತ್ತಿದ್ದಾರೆ. ಆದರೆ, ಈಗ ಅವರೆಲ್ಲ ಶೌಚಾಲಯ ಹೊಲಸಾಗಿದ್ದು, ಇದರಿಂದ ಕಷ್ಟ ಅನುಭವಿಸುತ್ತಿದ್ದಾರೆ.
ಸೈಬರ್ ಕ್ರೈಮ್ ಪೊಲೀಸ್ ಸ್ಟೇಷನ್ ಬಳಿಯೇ ಈ ಶೌಚಾಲಯ ಇದೆ. ಜತೆಗೆ ಇದರ ಬಳಿಯೆ ದೇವಸ್ಥಾನವು ಇದೆ. ಇನ್ನು ಇದೇ ಶೌಚಾಲಯಕ್ಕೆ ಹೊಂದಿಕೊಂಡೆ ಕಾರು ತೊಳೆಯುವ ಜಾಗವಿದ್ದು, ನಿತ್ಯವೂ ನೂರಾರು ವಾಹನಗಳನ್ನು ಇಲ್ಲಿಯೆ ಸ್ವಚ್ಛ ಮಾಡಲಾಗುತ್ತದೆ. ಆದರೆ, ಆ ಜಾಗದಲ್ಲೆಲ್ಲ ಶೌಚಾಲಯ ವಾಸನೆ ಬರುತ್ತಿದೆ.
ಸಮರ್ಪಕವಾಗಿ ನೀರು ಪೂರೈಕೆ ಆಗದಿದ್ದರಿಂದಲೇ ಈ ದುಸ್ಥಿತಿ ಬಂದಿದೆ ಎಂದು ಕಚೇರಿಯ ಸಿಬ್ಬಂದಿ ಹೇಳುತ್ತಾರೆ. ರಾಜ್ಯದ ಕಳ್ಳಕಾಕರ ನಿದ್ದೆಗೆಡಿಸುವ ಸಿಐಡಿ ಕಚೇರಿ ಬಳಿಯೇ ಸಿಬ್ಬಂದಿ ಶೌಚಾಲಯಕ್ಕೆ ಅಂಜುವ ಸ್ಥಿತಿ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಶೌಚಾಲಯ ಸ್ವಚ್ಛಗೊಳಿಸಬೇಕಾಗಿದೆ.
0 comments:
Post a Comment