ಸಿನಿಮಾ. ಈ ಹೆಸರು ಕೇಳಿದರೆ ಉತ್ತರ ಕರ್ನಾಟಕದ ಬಹುಪಾಲು ಹುಡುಗರು ಆಕರ್ಷಿತರಾಗುತ್ತಾರೆ. ಸಿನಿಮಾ ಗೀಳಿಗೆ ಬಿದ್ದು ಬೆಂಗಳೂರಿಗೆ ಹೋದ ಸಾಕಷ್ಟು ಮಂದಿ, ಸಮಸ್ಯೆಗಳನ್ನು ಎದುರಿಸಿ ವಾಪಸ್ ಊರಿಗೆ ಬರುತ್ತಿದ್ದಾರೆ. ಕೆಲವರು ದುಡ್ಡು ಕಳೆದುಕೊಂಡು ಸಂಕಟ ಅನುಭವಿಸುತ್ತಿದ್ದಾರೆ.
ಆದರೆ, ನಮ್ಮ ಈ ಉತ್ತರ ಕರ್ನಾಟಕ ಹುಡುಗರು ಮಾತ್ರ ಈ ಅಪವಾದಕ್ಕೆ ವಿರುದ್ಧ. ಯಾರೊಬ್ಬರ ಸಹಾಯವೂ ಇಲ್ಲದೆ, ಸ್ವತಃದ್ದೊಂದು ತಂಡ ಕಟ್ಟಿಕೊಂಡು ಸಾಮಾಜಿಕ ಕಳಕಳಿಯ ವಿಷಯವನ್ನಿಟ್ಟುಕೊಂಡು ಕಿರುಚಿತ್ರ ನಿರ್ಮಿಸುತ್ತಿದ್ದಾರೆ. ಆ ತಂಡವೇ ‘ಮಿಡಿಯಾ ಮೈಂಡ್ ಕ್ರಿಯೆಷನ್ಸ್’.
ಇದರಲ್ಲಿ ಇರುವ ಹುಡುಗರೆಲ್ಲ ಉತ್ತರ ಕರ್ನಾಟಕದವರು. ಹುಡಗಿಯರು ಇಲ್ಲಿಯವರೆ. ಇಂಥ ತಂಡ, ಈ ಹಿಂದೆ ನಿರ್ಮಿಸಿದ್ದ ‘ಪಶ್ಚಾತಾಪ’ ಕಿರುಚಿತ್ರ ಯುಟ್ಯೂಬ್‌ನಲ್ಲಿ ಸಾಕಷ್ಟು ಸದ್ದು ಮಾಡಿದೆ. ಹೆಣ್ಣು ಮಕ್ಕಳ ಮಾರಾಟ ಕುರಿತ ಈ ಚಿತ್ರಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಈಗ ಇದೇ ತಂಡ ಮತ್ತೊಂದು ಕಿರುಚಿತ್ರ ನಿರ್ಮಿಸಿ, ಅದನ್ನು ತೆರೆಗೆ ತರಲು ಸಜ್ಜಾಗಿದೆ. ಆ ಕಿರುಚಿತ್ರದ ಹೆಸರೇ ‘ರೈತ ಇನ್ನಿಲ್ಲ’
ಹೆಸರೇ ಹೇಳುವಂತೆ ರೈತರ ಆತ್ಮಹತ್ಯೆ ಆಧರಿತ ವಿಷಯವನ್ನಿಟ್ಟುಕೊಂಡು ಈ ಬಾರಿ ‘ರೈತ ಇನ್ನಿಲ್ಲ’ ಕಿರುಚಿತ್ರ ನಿರ್ಮಿಸಲು ಮುಂದಾಗಿದೆ ಈ ತಂಡ.
ಹಳ್ಳಿಗಳಲ್ಲಿ ರೈತರು ಅನುಭವಿಸುವ ಕಷ್ಟ. ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳನ್ನು ಈ ಚಿತ್ರದ ಮೂಲಕ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ ‘ಮಿಡಿಯಾ ಮೈಂಡ್ ಕ್ರಿಯೆಷನ್ಸ್’ ತಂಡದ ಹುಡುಗರು.
ಅಕ್ಟೋಬರ್ 10, 2017 ರಂದು ಬೆಳಿಗ್ಗೆ 11 ಗಂಟೆಗೆ ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಉತ್ಸವ ಸಭಾಭವನದಲ್ಲಿ ಕಿರಚಿತ್ರದ ಮೊದಲ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಇದಕ್ಕೆ ಜೆಎಎಸ್ ಆಡಳಿತ ಮಂಡಳಿ ಹಾಗೂ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆ ಆಡಳಿತ ಮಂಡಳಿ ಸಹಕಾರ ನೀಡುತ್ತಿದೆ.
ಈಗಾಗಲೇ ಕಿರುಚಿತ್ರದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿರುವ ತಂಡ, ಅದರ ಮೂಲಕ ಸದ್ದು ಮಾಡುತ್ತಿದೆ. ಉತ್ತರ ಕರ್ನಾಟಕದ ಜನ ಈ ಕಿರುಚಿತ್ರ ನೋಡಿ ಪ್ರೋತ್ಸಾಹಿಸಿದರೆ ಸಾಕು ಎನ್ನುತ್ತಾರೆ ತಂಡದ ಸದಸ್ಯರು.
ಈ ಚಿತ್ರತಂಡಕ್ಕೆ ನಮ್ಮ ಆಲ್ ದ ಬೆಸ್ಟ್. ನೀವು ಪ್ರದರ್ಶನಕ್ಕೆ ಹೋಗಿ ಶುಭಾಷಯ ಕೋರಿ....
ಈ ಚಿತ್ರತಂಡಕ್ಕೆ ನಮ್ಮ ಆಲ್ ದ ಬೆಸ್ಟ್. ನೀವು ಪ್ರದರ್ಶನಕ್ಕೆ ಹೋಗಿ ಶುಭಾಷಯ ಕೋರಿ....
ಕಿರುಚಿತ್ರದ ಮೊದಲ ಪ್ರದರ್ಶನ
ಅಕ್ಟೋಬರ್ 10, 2017, ಸಮಯ : ಬೆಳಿಗ್ಗೆ 11
ಸ್ಥಳ: ಉತ್ಸವ ಸಭಾಭವನ, ಜೆ.ಎಸ್.ಎಸ್, ವಿದ್ಯಾಗಿರಿ, ಧಾರವಾಡ
ಮೊ. 9448841652
ಫೇಸ್‌ಬುಕ್ ಪೈಜ್ ಲೈಕ್ ಮಾಡಿ:
https://www.facebook.com/MEDIA-MIND-Creation-223289478112458/notifications/
ಯುಟ್ಯೂಬ್ ಚಾನೆಲ್ ಸಬ್‌ಸ್ಕೈಬ್ ಮಾಡಿ
https://www.youtube.com/channel/UC7zfUu9C_SHaozQtm9s1p9Q