ಜಕಾರ್ತ, ಜುಲೈ 29: ಇಂಡೋನೇಷಿಯಾದ ಲಾಂಬೊಕ್ ದ್ವೀಪ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ಈ ದುರ್ಘಟನೆಯಲ್ಲಿ 10 ಮಂದಿ ಮೃತಪಟ್ಟಿರುವ ವರದಿ ಬಂದಿದೆ. ಜನಪ್ರಿಯ ಪ್ರವಾಸಿ ತಾಣ ಬಾಲಿ ದ್ವೀಪದಿಂದ ಪೂರ್ವಕ್ಕೆ 10 ಕಿ.ಮೀ ದೂರದಲ್ಲಿರುವ ಲಾಂಬೊಕ್ ನಲ್ಲಿ 6.4 ರಷ್ಟು ಪ್ರಬಲ ಭೂಕಂಪ ಇದಾಗಿದೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಹಲವಾರು ಕಟ್ಟಡಗಳು ನೆಲಸಮವಾಗಿವೆ.
from Oneindia.in - thatsKannada News https://ift.tt/2mRkgWv
0 comments:
Post a Comment